ಫ್ರಾನ್ಸಿನಲ್ಲಿ ಜನಿಸಿದ ಸ್ವಿಟ್ಝರ್ಲೆಂಡಿನ ರಸಾಯನವಿಜ್ಞಾನಿಯಾಗಿದ್ದ ಆಲ್ಪ್ರೆಡ್ ವೆರ್ನೆರ್ರವರು 1866ರ ಡಿಸೆಂಬರ್ 12ರಂದು ಅಲ್ಸೇಸ್ನ ಮುಲ್ಹೌಸ್ ನಲ್ಲಿ ಜನಿಸಿದರು. ವೆರ್ನೆರ್ರವರು 1890ರಲ್ಲಿ ತಮ್ಮ ಗುರು ಆರ್ಥರ್ ಹಂಟ್ಸ್ಝ್ರವರ (1857-1935) ಕೆಲಸ ಮಾಡುವ ಸಂದರ್ಭದಲ್ಲಿ ಕಆಕ್ಸೈಮ್ಸ್ಕಿಗಳ () ರಚನೆ ಮತ್ತು ನರಾಸಾಯನಿಕ () ಗುಣಸ್ವಭಾವಗಳನ್ನು ವಿವರಿಸಿದರು. ಆಕ್ಸೈಮ್ಸ್ಗಳೆಂದರೆ ಗುಂಪಿನ ಕಾರ್ಬನಿಕ ಸಂಯುಕ್ತಗಳಾಗಿವೆ ( ). ಈ ಸಂಯುಕ್ತಗಳು ಕಾರ್ಬನ್-ಕಾರ್ಬನ್ ದ್ವಿ-ಬಂಧಗಳಂತೆಯೇ ( ) ಜ್ಯಾಮಿತೀಯ ಸಮಾಂಗತೆಯನ್ನು ( ) ಪ್ರದರ್ಶಿಸುತ್ತವೆ ಎಂಬುದಾಗಿ ಅವರು ತೋರಿಸಿಕೊಟ್ಟರು. ಹಾಗೆಯೇ ಅವರು ಸಹಯೋಜಕ ಸಂಯುಕ್ತಗಳಲ್ಲಿನ ( ) ಬಂಧಗಳ ಬಗ್ಗೆ ಸಿದ್ಧಾಂತಗಳನ್ನು ಮಂಡಿಸಿದರು. [ಸಹಯೋಜಕ ಸಂಯುಕ್ತಗಳೆಂದರೆ ಕೇಂದ್ರೀಯ ಪರಮಾಣುವೊಂದಿದ್ದು ಅದಕ್ಕೆ ಇತರ ಪರಮಾಣುಗಳು ಬಂಧಿತವಾಗಿರುವಂಥ ಅಥವಾ ಸಹಯೋಜಕವಾಗಿರುವಂಥ (ಅವುಗಳಿಗೆ ಕಲಿಗ್ಯಾಂಡ್ಕಿಗಳೆಂದು ಕರೆಯಲಾಗುತ್ತದೆ) ಸಂಯುಕ್ತವಾಗಿದೆ.] ಎಲೀನ್ ಡೈಯಾಮಿನ್ ( ) ಸಹಯೋಜಕ ಬಂಧಗಳ ( ) ಜೋಡಿಯ ನಡುವಿನ ಸೇತುವೆಯಾಗಿ ವರ್ತಿಸುತ್ತದೆ ಎಂಬುದಾಗಿಯೂ ಅವರು ಕಂಡುಹಿಡಿದರು. ವೆರ್ನೆರ್ರವರ ಸಹಯೋಜಕ ಬಂಧಗಳ ಬಗ್ಗೆಯ ಸಂಶೋಧನೆಗಳಿಗೆ 1913ರ ರಸಾಯನವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ವೆರ್ನೆರ್ರವರು 1919ರ ನವೆಂಬರ್ 15ರಂದು ಝೂರಿಚ್ನಲ್ಲಿ ನಿಧನರಾದರು. == ಉಲ್ಲೇಖಗಳು ==